Chief Editor
Manohar. R (Manu)
Photo Journalist
chitrataramanu@gmail.com
+91 9845549026
ದ ರೂಲರ್ಸ್ Power of Constitution ಟೀಸರ್ ಸಕ್ಸಸ್ ಹೊಸಬರ ತಂಡದ ಪ್ರಯತ್ನಕ್ಕೆ ಅಭೂತಪೂರ್ವ ರೆಸ್ಪಾನ್ಸ್
Posted date: 14 Sun, Jan 2024 01:26:38 PM
ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದಿಲ್ಲದೇ ಸಿದ್ದವಾಗಿರೋ ಹೊಸ ಸಿನ್ಮಾ ದ ರೂಲರ್ಸ್. ಟೈಟಲ್ ನಡಿಯಲ್ಲಿ Power of Constitution ಅನ್ನೋ ಅಡಿ ಬರಹವನ್ನಿಟ್ಟಿರೋ ಈ ಸಿನಿಮಾದ ಟೀಸರ್  ಹೊಸ ವರ್ಷದ ಮೊದಲ ದಿನ ಎ2 ಮ್ಯೂಸಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿತ್ತು. ಇದೀಗ ನಾಲ್ಕೇ ದಿನದಲ್ಲೇ ಒಂದು ಮಿಲಿಯನ್ ಜನರನ್ನ ಈ ಟೀಸರ್ ಸೆಳೆದಿದ್ದು, ರಾಜ್ಯದಾದ್ಯಂತ ಸಿನಿಪ್ರಿಯರಿಂದ ಪ್ರಶಂಸೆಯ ಪ್ರತಿಕ್ರಿಯೆಗಳು ಮತ್ತು ಅಭಿನಂದನೆಯ ಕಮೆಂಟ್ ಗಳು ಬಂದಿವೆ. ಈ ವಿಚಾರವಾಗಿ ಪತ್ರಿಕಾಗೋಷ್ಠಿ ಕರೆದಿದ್ದ ಚಿತ್ರತಂಡ. ದ ರೂಲರ್ಸ್ ಚಿತ್ರದ ಅಪ್ಡೇಟ್ ಜೊತೆಗೆ ಚಿತ್ರದ ವಿಶೇಷತೆಗಳನ್ನ ಹಂಚಿಕೊಂಡಿದ್ದಾರೆ.

ದ ರೂಲರ್ಸ್ ನೈಜ ಘಟನೆಗಳನ್ನಾಧರಿಸಿ ಮಾಡಿರೋ ಚಿತ್ರ. ಕೋಲಾರ ಜಿಲ್ಲೆಯಲ್ಲಿ ನಡೆದಿರೋ,ನಡೆಯುತ್ತಿರೋ ಘಟನಾವಳಿಗಳನ್ನಾಧರಿಸಿ ಮಾಡಿರೋ ಕಥೆ. ಸಂವಿಧಾನವೊಂದು ಆಸರೆ ಮತ್ತು ಶಕ್ತಿ ಎಂಥಹದ್ದು, ಅದು ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥಹದ್ದು ಅನ್ನೋ ವಿಚಾರವನ್ನ ಮೂಲವಾಗಿಸಿಕೊಂಡು ದ ರೂಲರ್ಸ್ ಚಿತ್ರವನ್ನ ಮಾಡಲಾಗಿದೆ.

ಇಲ್ಲಿ ಮೇಲೂ ಕೀಳು ಅನ್ನೋ ಸಮುದಾಯಗಳ ಸಂಘರ್ಷದಿ ಮರೆಯಾದ ಮಾನವೀಯತೆಯನ್ನ ಒಂದು ಕಡೆ ಬಂಬಿಸಿದ್ರೆ, ಮತ್ತೊಂದು ಕಡೆ ಸಂವಿಧಾನ ಕೊಟ್ಟಿರೋ ಸಮಾನತೆಯ ಹಕ್ಕನ್ನ ಪ್ರತಿಪಾದಿಸೋ, ಅದ್ರ ಶಕ್ತಿಯನ್ನ ಪ್ರದರ್ಶಿಸೋ ಮತ್ತೊಂದು ಮಜಲನ್ನ ಅನಾವರಣಗೊಳಿಸಿದ್ದಾರಂತೆ. 

ದ ರೂರಲ್ಸ್  ಹೆಸರೇ ಸೂಚಿಸುವಂತೆ ದ ಅಂದ್ರೆ ದಲಿತ ಇದಕ್ಕೆ ರೂಲರ್ಸ್ಸ್ ಅಂತ ಹೆಸರಿಟ್ಟಿರೋದ್ರ ಹಿಂದೆ ವಿಚಾರ ಇದೆಯಂತೆ. ಈ 5ಜಿ ಜಮಾನದಲ್ಲೂ ಇನ್ನೂ ಜಾಸಿ ಅನ್ನೋ ಪಿಡುಗು ಎಷ್ಟರ ಮಟ್ಟಿಗೆ ಶೀತಲವಾಗಿ ಸಮಾದೊಳಗಿದೆ. ಮತ್ತು ಅದರ ಪರಿಣಾಯ ಏನಾಗ್ತಿದೆ ಅನ್ನೋದನ್ನ ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.  

ದ ರೂಲರ್ಸ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರೋದು, ಕೋಲಾರದ ಡಾ. ಕೆ.ಎಮ್ ಸಂದೇಶ್. ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನ ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಯಾಗಿ 300ಕ್ಕೂ ಹೆಚ್ಚು ಹೋರಾಟ ಹಾಗೂ 150ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನ ಮಾಡಿದರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದ ರೂಲರ್ಸ್ Power of Constitution ಟೀಸರ್ ಸಕ್ಸಸ್ ಹೊಸಬರ ತಂಡದ ಪ್ರಯತ್ನಕ್ಕೆ ಅಭೂತಪೂರ್ವ ರೆಸ್ಪಾನ್ಸ್ - Chitratara.com
Copyright 2009 chitratara.com Reproduction is forbidden unless authorized. All rights reserved.